ಆದಿಶಕ್ತಿ ಅಮ್ಮನವರ ಅಂದವ ನೋಡು

ಆದಿಶಕ್ತಿ  ಅಮ್ಮನವರ  ಅಂದವನೋಡು
ಸಾಧಕರ ಸಾಧನೆಯ ಸುಂದರ  ಬೀಡು
ಸೌಂದರ್ಯದ  ತಾಣವಿದು ಅಮ್ಮನ ನಾಡು
ಮಂದಸ್ಮಿತೆ  ನೆಲೆಸಿರುವ ಸುಂದರ ಬೀಡು     ||೧||

ಕಷ್ಟ ಪರಿಹಾರಕ್ಕೆ ಅಮ್ಮನ  ಬೇಡು
ನಷ್ಟ  ಗೊಳಿಸದಿರಿ ಎoದು ಬೇಡುತ ಕಾಡು
ದುಷ್ಟ  ಶಕ್ತಿ ಜೊತೆಯಲ್ಲಿ ದಿನವೂ ಕಾದಾಡು
ಶಿಷ್ಟತನವೆಗೆಲ್ಲಲೆಂದು  ಪ್ರಾರ್ಥನೆ ಮಾಡು     ||೨||

ನೇಮ  ನಿಷ್ಟಯಲ್ಲಿ  ನಿತ್ಯ  ಪೂಜೆ ನಡೆವುದು
ಸತ್ಯ ಧರ್ಮ ಉಳಿಸಲೆಂದು ಕ್ಷೇತ್ರವಿರುವುದು
ಬರಿಗೈಲಿ ಹೋಗಲಾರ ಬಂದವನಿಲ್ಲಿ
ಇಷ್ಟಾರ್ಥ  ಪೂರೈಸುವ  ಇವಳೆ  ಕಲ್ಪವಲ್ಲಿ     ||೩||

ತೂಗು ಮಂಚದಲ್ಲಿ ತಾಯಿ ತೊಗುತಿರವಳು
ಕೂಗಿ   ಕೂಗಿ  ಭಕ್ತಿರನ್ನು  ಕರೆಯುತಿರುವಳು
ಎತ್ತೇನ  ಹಳ್ಳಿಯಲ್ಲಿ ಮೆರೆಯುತಿರುವಳು
ಮುತ್ತಿನಂಥ  ಮಾತೆಯಾಗಿ  ಬೆಳಗುತಿರುವಳು.     ||೪||