ಶ್ರೀ ಕ್ಷೇತ್ರ ಗವಿರಂಗನಾಥಸ್ವಾಮಿ ದೇವಸ್ಥಾನ

Sri Gaviranganatha Temple 1  Sri Gaviranganatha Temple 2

ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿರುವ ತುಮಕೂರು ಜಿಲ್ಲೆಯು ಇತಿಹಾಸ ಪ್ರಸಿದ್ಧವಾದದ್ದು. ಈ ಜಿಲ್ಲೆಯು ಕೆಲವು ಪುಣ್ಯ ಕ್ಷೇತ್ರಗಳಾದ ಶ್ರೀ ಸಿದ್ದಗಂಗಾಮಠ, ಗೂಳೂರಿನ ಶ್ರೀ ಗಣೇಶ, ಕೈದಾಳದ ಶ್ರೀ ಚೆನ್ನಕೇಶವ ದೇವಾಲಯ, ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿದೇವಸ್ಥಾನ, ಚಿಕ್ಕಸಾರಂಗಿಯ ಶ್ರೀ ತೋಪಿನರಂಗನಾಥಸ್ವಾಮಿ ದೇವಾಲಯ, ಗವಿರಂಗನಾಥಸ್ವಾಮಿ ದೇವಾಲಯ, ಗೊರವನಹಳ್ಳಿ ಶ್ರೀಲಕ್ಷ್ಮಿದೇವಸ್ಥಾನ ಮುಂತಾದವುಗಳು ಸಹಸ್ರಾರು ಭಕ್ತಾದಿಗಳಿಗೆ ಪವಿತ್ರ-ಪುಣ್ಯ ಕ್ಷೇತ್ರಗಳೆಂದು ಜನಪ್ರಿಯವಾಗಿದೆ.

ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು, ಗೂಳೂರು ಹೋಬ್ಳಿಗೆ ಶ್ರೀ ಕ್ಷೇತ್ರ ಗವಿರಂಗನಾಥಸ್ವಾಮಿ ದೇವಸ್ತಾನ ಸೇರುತ್ತದೆ. ಇದು ತುಮಕೂರು ನಗರದಿಂದ ಸುಮಾರು 9 ಕಿಲೋ ಮೀಟರ್  ದೂರದಲ್ಲಿದೆ. ಶ್ರೀ ಕ್ಷೇತ್ರ ಗವಿರಂಗನಾಥಸ್ವಾಮಿ ದೇವಸ್ಥಾನವು ಬಹಳ ಪುರಾತನ ಕಾಲದ ದೇವಸ್ಥಾನವು ಆಗಿದ್ದು ಸಹಸ್ರಾರುಮಂದಿ ಭಕ್ತರು ಇದರ ಜಾತ್ರಾಮಹೋತ್ಸವವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸುತ್ತಾರೆ. ಈ ದೇವಸ್ಥಾನದ ಸಮೀಪವೇ ಗುಡ್ಡದ ರಂಗ, ತೋಪೀ ರಂಗ ಶ್ರೀ ಕ್ಷೇತ್ರವು ಬರುತ್ತದೆ.