ಜಯ ಜಯ ಜಗದಂಬ

ಜಯ  ಜಯ ಜಗದಂಬ
ಭವಾನಿ  ಜಯ ಜಯ ಜಗದಂಬ
ನಿರುತವು  ನಿನ್ನಯ  ಧ್ಯಾನದೊಳಿರುವೆ
ಅನವರತವು  ನಾ  ಬೇಡುತಲಿರುವೆ
ಭಕ್ತರ ಪಾಲಿನ ಕಾಮಧೇನು
ಶಕ್ತಿ  ಸ್ವರೂಪಿಣಿ  ನಂಬಿದೆ ನಾನು     ||೧||

ಲೋಕದ  ಸೃಷ್ಠಿಗೆ ಕಾರಣ ನೀನು
ನಂಬಿದ  ಭಕುತರ ಸಲಹುವಧೇನು
ಶೋಕವ  ಹರಿಸಿ  ಸಂತಸ ನೀಡು
ಕಾಕುಮನುಜನರ  ಕರುಣದಿ ನೋಡು     ||೨||

ಮೂಲಶಕ್ತಿ  ಮಹಾತ್ಮಳೆ  ನೀನು
ಆದಿಶಕ್ತಿಯ  ಅವತಾರವನು
ತಾಳಿದೆ ಬಾಳಿದೆ ದುರುಳರ ತರಿದೆ
ಕಾಳಿಯ  ಅವತಾರವ ನೀ  ಧರಿಸಿದೆ     ||೩||

ಭವದ ಬೇಗೆಯು ದಹಿಸುತಲಿಹದು
ನೋವನು ತಾಳದೆ ತಪಿಸುತಲಿಹುದು
ತನುಮನ  ನಿನ್ನಯ  ಸ್ಮರಣಿಯಲಿಹುದು
ಕನಿಕರಿಸೆಂದು  ಕೈಯನು  ಮುಗಿದು     ||೪||