ಜಯತು ಜಗಜನನೀ

ಜಯತು  ಜಗಜನನಿ
ನಿನ್ನ  ನಾಮವು  ದಿವ್ಯ ಪ್ರೇಮವು
ನಮಗೆ ವರವಾಯ್ತು  ಬಾಳು  ಬೆಳಕಾಯ್ತು     ||೧||

ಪಾವನಾತ್ಮಳೆ   ಶರಣು  ಬಂದೆ
ಪಾಪಹಾರಿಣೆ  ಬೇಡಿಕೊಂಬೆ
ದರುಶನ  ನೀಡಮ್ಮ ಹರುಷವ  ತೋರಮ್ಮ
ಆದಿಶಕ್ತಿ  ಪರಮಪಾವನೀ     ||೨||

ಕನಸು ಮನಸಲು ಕಾಣುವೆಯಮ್ಮಾ
ಮನದ ತುಂಬಾ ತುಂಬಿಹೆಯಮ್ಮ
ಕರುಣೆಯ ತೋರಮ್ಮ ತಾಯೆ ಮಾರಮ್ಮ
ಮನ್ನಿಸಿ ಮುನ್ನಡೆಸಿ  ದಾರಿಯ ತೋರು     ||೩||

ಭಾವದ  ಬೇಗೆಯೂ  ದಹಿಸುತಲಿಹುದು
ಭುವನೇಶ್ವರಿಯೆ  ಹೇಗೆ  ಸಹಿಸಲಿ
ನಿನ್ನನೆ  ನಂಬಿಹೆ  ನೀನೇ  ಗತಿಯೆನುವೆ
ಆದಿಶಕ್ತಿ  ಮಹಾ  ತಾಯಿಯೇ     ||೪||

ಹರಿಹರ  ಬ್ರಹ್ಮರು ನಿನ್ನಲಿ  ಜನಿಸಿ
ನರಲೋಕವನು  ಸಲಹುತ ರಕ್ಷಿಸಿ
ಕಾರಣೆಭೂತಳು ಕರುಣಾಮಯಿಯು
ನೀನೆ  ತಾಯೆ  ಮಹಾಮಾಯಿಯು     ||೫||