ವಂದಿಸುವೆ ಪರಬ್ರಹ್ಮಿಣಿ

ವಂದಿಸುವೆ  ಪರಬ್ರಹ್ಮಿಣಿ ವರವಕರುಣಿಸು
ಬಂದೆ ತಾಯೆ ನಿನ್ನನಂಬಿ  ಭವವ ತೊಲಗಿಸು
ಸೃಷ್ಠಿ  ಸ್ಥಿತಿ  ಲಯ ಕರ್ತಳೆ ಹೇ ಆದಿಶಕ್ತೀ
ಕಷ್ಟಗಳನು ಕಳೆಯೆ ತಾಯೆ ಇದೇ ನಮ್ಮ ಭಕ್ತಿ     ||೧||

ಆದಿಶಕ್ತಿ ಮಹಾಮಾಯೆ ಶಂಕರಿ ಜಗದೀಶ್ವರಿ
ಸದಾ  ನಮ್ಮ  ಪೊರೆವ  ತಾಯೆ ಚಾಮುಂಡೇಶ್ವರಿ
ವಿಶ್ವೇಶ್ವರ ವಿಶಾಲಾಕ್ಷಿ ನೀನೆ ಶಿವಶಂಕರಿ
ಶಾಶ್ವತದ  ಪದವಿ  ನೀಡು ಹೇ ಅರಿಭಯಂಕರಿ     ||೨||

ಭಾವದಿ ಬಳಲಿ ಬಾಧೆ  ಪಡುತ ನಿನ್ನ ಬೇಡುವೇ
ನೋವ  ಕಳೆಯಲೆಂದು   ಭುವಿಗೆ ನೀನೆ ಇಳಿದಿಹೆ
ನಿನ್ನ  ಹೊರತು  ಅನ್ಯರಿಲ್ಲ ನೀನೆ ಸರ್ವೇಶ್ವರಿ
ಕೈ ಬಿಡದೆ  ಸಲಹು ನಮ್ಮ  ಉಮಾಮಹೇಶ್ವರಿ     ||೩||