ಸ್ವಾಗತಂ…

ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿರುವ ತುಮಕೂರು ಜಿಲ್ಲೆಯು ಇತಿಹಾಸ ಪ್ರಸಿದ್ಧವಾದದ್ದು. ಈ ಜಿಲ್ಲೆಯು ಕೆಲವು ಪುಣ್ಯಕ್ಷೇತ್ರಗಳಾದ ಶ್ರೀಸಿದ್ದಗಂಗಾಮಠ, ಗೂಳೂರಿನ ಶ್ರೀ ಗಣೇಶ, ಕೈದಾಳದ ಶ್ರೀ ಚೆನ್ನಕೇಶವ ದೇವಾಲಯ, ಹೆತ್ತೇನಹಳ್ಳಿಯ ಶ್ರೀ ಆದಿಶಕ್ತಿದೇವಸ್ಥಾನ, ಚಿಕ್ಕಸಾರಂಗಿಯ ಶ್ರೀ ತೋಪಿನರಂಗನಾಥಸ್ವಾಮಿ ದೇವಾಲಯ, ಗವಿರಂಗನಾಥಸ್ವಾಮಿ ದೇವಾಲಯ, ಗೊರವನಹಳ್ಳಿ ಶ್ರೀಲಕ್ಷ್ಮಿ ದೇವಸ್ಥಾನ ಮುಂತಾದವುಗಳು ಸಹಸ್ರಾರು ಭಕ್ತಾದಿಗಳಿಗೆ ಪವಿತ್ರ-ಪುಣ್ಯ ಕ್ಷೇತ್ರಗಳೆಂದು ಜನಪ್ರಿಯವಾಗಿದೆ.

ತುಮಕೂರುಜಿಲ್ಲೆ, ತುಮಕೂರು ತಾಲ್ಲೂಕು, ಗೂಳೂರು ಹೋಬ್ಳಿಗೆ ಶ್ರೀಕ್ಷೇತ್ರಹೆತ್ತೇನಹಳ್ಳಿ ಗ್ರಾಮವು ಸೇರಿದೆ. ಇದು ತುಮಕೂರು ನಗರದಿಂದ ಸುಮಾರು 9 ಕಿಲೋ ಮೀಟರ್ ದೂರದಲ್ಲಿದೆ. ಶ್ರೀಕ್ಷೇತ್ರಹೆತ್ತೇನಹಳ್ಳಿ ಗ್ರಾಮದ ಅಧಿದೇವತೆಯಾದ ಶ್ರೀಆದಿ ಶಕ್ತಿಹೆತ್ತೇನಹಳ್ಳಿ ಅಮ್ಮನವರ ಜಾತ್ರಾಮಹೋತ್ಸವವು ಸುಮಾರು ಎಂಟು ದಿವಸಗಳ ಕಾಲ ಅತ್ಯಂತ ವಿಜೃಂಬಣೆಯಿಂದ ಜರುಗುತ್ತದೆ.